ಕಾಬೂಲ್ ನಲ್ಲಿ ಬಾಂಬ್ ದಾಳಿ: 20 ಮಂದಿ ಮೃತ್ಯು
ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಸಂಜೆ ಪ್ರಾರ್ಥನೆಯ ವೇಳೆ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ.
ಯಾವುದೇ ಉಗ್ರ ಸಂಘಟನೆ ಈ ಬಾಂಬ್ ದಾಳಿ ಹಿಂದಿನ ಹೊಣೆ ವಹಿಸಿಕೊಂಡಿಲ್ಲ.
ಇದೊಂದು ಆತ್ಮಾಹುತಿ ದಾಳಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಘಟನೆಯಲ್ಲಿ ಮುಸ್ಲಿಂ ಧರ್ಮಗುರು ಮುಲ್ಲಾ ಅಮೀರ್ ಮೊಹಮ್ಮದ್ ಕಾಬೂಲಿ ಮೃತಪಟ್ಟಿದ್ದಾರೆ.




