February 2, 2026

ಕಾಸರಗೋಡು: ಅಣೆಕಟ್ಟಿನಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನಾಪತ್ತೆ

0
image_editor_output_image-756102610-1660630025903.jpg

ಕಾಸರಗೋಡು: ಅಣೆಕಟ್ಟಿನಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಸೋಮವಾರ ಸಂಜೆ ಮಣಿಯಂಪಾರೆಯಲ್ಲಿ ನಡೆದಿದೆ.

ಚಲ್ಲಂಗಯ ಸಿ.ಜೆ ಮೂಲೆಯ ಅಬ್ದುಲ್ಲ ರವರ ಪುತ್ರ ಜಸ್ವಾದ್ (17) ನಾಪತ್ತೆಯಾದವನು. ಸ್ನೇಹಿತರ ಜೊತೆ ಸ್ನಾನಕ್ಕಿಲಿದ ಸಂದರ್ಭದಲ್ಲಿ ನೀರುಪಾಲಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು , ಸ್ಥಳೀಯರು ರಾತ್ರಿ ತನಕ ಶೋಧ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಜಸ್ವಾದ್ ಮುಹಿಮ್ಮತ್ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!