March 25, 2026

ಶಿವಮೊಗ್ಗ: ಚೂರಿ ಇರಿದ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧನ

0
image_editor_output_image-1703800015-1660627807877.jpg

ಶಿವಮೊಗ್ಗ: ನಗರದಲ್ಲಿ ಸೋಮವಾರ ಬಟ್ಟೆ ಅಂಗಡಿ ಕೆಲಸಗಾರ ಪ್ರೇಮ್ ಸಿಂಗ್‌ಗೆ ಚೂರಿ ಇರಿದ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಮಾರ್ನಮಿಬೈಲು ನಿವಾಸಿ ಚರ್ಬಿ ಅಲಿಯಾಸ್ ಮೊಹಮ್ಮದ್ ಜಬಿ (30) ಗುಂಡೇಟು ಬಿದ್ದ ಆರೋಪಿ.

ಎನ್.ಟಿ.ರಸ್ತೆಯ ಫಲಕ್ ಪ್ಯಾಲೇಸ್ ಬಳಿ ಆರೋಪಿ ಇರುವ ಮಾಹಿತಿ ಅರಿತ ಪೊಲೀಸರ ತಂಡ ಮಂಗಳವಾರ ನಸುಕಿನಲ್ಲಿ ಬಂಧಿಸಲು ತೆರಳಿತ್ತು. ಈ ವೇಳೆ ಜಬಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ವಿನೋಬ‌ನಗರ ಠಾಣೆ ಪಿಎಸ್ ಐ ಮಂಜುನಾಥ ಕುರಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಅರೋಪಿಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಲತ್ರೆಗೆ ದಾಖಲಿಸಲಾಗಿದೆ.

ಪ್ರೇಮ್ ಸಿಂಗ್ ಮೇಲೆ ಚೂರಿ ಇರಿತದ ಪ್ರಕರಣದಲ್ಲಿ ಇಲ್ಲಿಯವರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!