August 25, 2026

ವಿಟ್ಲ ವಲಯ ಎಸ್.ವೈ.ಎಸ್.ವತಿಯಿಂದ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಪ್ರಯುಕ್ತ “ಫ್ರೀಡಂ ಸ್ವೀಟ್ ” ಕಾರ್ಯಕ್ರಮ

0
IMG-20220815-WA0116

ಪುತ್ತೂರು :  ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಪ್ರಯುಕ್ತ ಎಸ್.ವೈ.ಎಸ್.ವಿಟ್ಲ ವಲಯ ಸಮಿತಿ ವತಿಯಿಂದ “ಫ್ರೀಡಂ  ಸ್ಚೀಟ್” ಕಾರ್ಯಕ್ರಮ ವು ವಿಟ್ಲದ ನಿರಕ್ಕಣಿ ಮದ್ರಸ ವಠಾರದಲ್ಲಿ ಜರಗಿತು.
    ದೇಶದ ಅತೀದೊಡ್ಡ ಉಲಮಾ ಸಂಘಟನೆಯಾದ ‘ಸಮಸ್ತ’ ದ ಅಧೀನದ ಯುವ ಸಂಘಟನೆಯಾದ ಎಸ್.ವೈ.ಎಸ್. ನ ಕೇಂದ್ರ ಸಮಿತಿಯ ನಿರ್ದೇಶನದಂತೆ ದ.ಕ.ಜಿಲ್ಲೆಯ ಪ್ರತಿ ವಲಯದಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಪ್ರಯುಕ್ತ ಇಂದು “ಫ್ರಿಡಂ ಸ್ವೀಟ್” ಕಾರ್ಯಕ್ರಮ ನಡೆಸಲಾಗುತ್ತಿದೆ.
    ಇಂದು ವಿಟ್ಲ ವಲಯ ಎಸ್.ವೈ.ಎಸ್.ವತಿಯಿಂದ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಸಮಿತಿ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಅವರು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸಂದೇಶ ಭಾಷಣ ಮಾಡಿದರು. ಕೋಶಾಧಿಕಾರಿ ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ, ವಿವಿಧ ಶಾಖಾ ಪ್ರತಿನಿಧಿಗಳಾದ ಮುಹಮ್ಮದ್ ಮಾಮು ರಾಧುಕಟ್ಟೆ, ಸುಲೈಮಾನ್ ಪರ್ತಿಪ್ಪಾಡಿ, ಮೊಯ್ದು ಹಾಜಿ ನೀರಕ್ಕಣಿ, ಹಂಝ ಹನೀಫಿ ಪರ್ತಿಪ್ಪಾಡಿ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!