ಕಲ್ಲಡ್ಕ: 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚೇರ್ಲ್ ಒರು ನಾಲ್ ಕ್ರೀಡಾಕೂಟ
ಗಣರಾಜ್ಯ ರಕ್ಷಿಸಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ, 75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ‘ತಾಜ್ ಬ್ರದರ್ಸ್, ಗೋಳ್ತಮಜಲ್’ ಇದರ ವತಿಯಿಂದ ‘ಚೇರ್ಲ್ ಒರು ನಾಲ್’ ಎಂಬ ಶ್ರೀರ್ಷಿಕೆಯಡಿ ಕ್ರೀಡಾಕೂಟವು ಗೋಳ್ತಮಜಲಿನ ಮದಕ ಮೈದಾನದಲ್ಲಿ ಇಂದು ನಡೆಯಿತು.

ಇದರ ಪ್ರಯುಕ್ತ ಗುಂಡು ಎಸೆತ, ಹಗ್ಗಜಗ್ಗಾಟ, ವಾಲಿಬಾಲ್, ಗೋಣಿ ಚೀಲ ಓಟ ಮೊದಲಾದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವಕರು, ಮಕ್ಕಳ ಸಹಿತ ಗ್ರಾಮಸ್ಥರು ಉತ್ಸಾಹದಿಂದ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬಳಿಕ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗೋಳ್ತಮಜಲ್ ಅಧ್ಯಕ್ಷರಾದ ಸಿದ್ದಿಕ್ ಮದಕ ವಹಿಸಿದ್ದರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕಲ್ಲಡ್ಕ ಡಿವಿಷನ್ ಅಧ್ಯಕ್ಷರಾದ ಸಿದ್ದಿಕ್ ಕಲ್ಲಡ್ಕ ಸಮಾರೋಪ ಭಾಷಣಗೈದರು.
ಮುಖ್ಯ ಅತಿಥಿಯಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಝಕರಿಯ ಗೋಳ್ತಮಜಲ್ ಆಗಮಿಸಿದ್ದರು.. ಈ ಸಂದರ್ಭದಲ್ಲಿ ಯಾಸಿರ್ ಕಲ್ಲಡ್ಕ, ಅಯ್ಯುಬ್ ಕಲ್ಲಡ್ಕ, ಉದ್ಯಮಿ ಮರ್ಷದ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.






