ತಲಪಾಡಿ: 75ನೇ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ, ಆ. 15: ತಲಪಾಡಿ ಬದ್ರಿಯಾ ಜುಮಾ ಮಸೀದಿ ಹಾಗೂ ಆಡಳಿತ ಕಮಿಟಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಆಡಳಿತ ಕಮಿಟಿಯ ಅಧ್ಯಕ್ಷ ಇದಿನಬ್ಬ ಅವರು ಧ್ವಜಾರೋಹಣ ನೆರವೇರಿಸಿದರು.
ಮಸೀದಿಯ ಖತೀಬ್ ಹಂಝ ಫೈಝಿ ಅವರು ದುಆ, ಅಶೀರ್ವಚನ ನೀಡಿದರು.




ಈ ಸಂದರ್ಭದಲ್ಲಿ ಆಡಳಿತ ಕಮಿಟಿಯ ಸದಸ್ಯರಾದ ಲತೀಫ್ ಬಿ.ಸಿ., ಅಲ್ತಾಫ್, ಶಾಹುಲ್ ಹಮೀದ್, ಕರೀಂ, ಅನ್ವರ್ , ಮಂಡಳಿಯ ಅಧ್ಯಕ್ಷ ಇದಿನಬ್ಬ, ಸ್ಥಳೀಯರಾದ ಆದಂ, ಆರ್‌ಕೆ ಅಬೂಬಕರ್, ಇದಿನಬ್ಬ ಕೆಎಸ್ಸಾರ್ಟಿಸಿ ಮತ್ತಿತರರು ಉಪಸ್ಥಿತರಿದ್ದರು.
ಅಶ್ರಫ್ ಸ್ವಾಗತಿಸಿ, ನಿರೂಪಿಸಿದರು.