December 19, 2025

ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ಗ್ರೆನೇಡ್ ಪತ್ತೆ:
ಪೊಲೀಸರ ವಶಕ್ಕೆ

0
IMG-20211107-WA0008

ಉಪ್ಪಿನಂಗಡಿ: ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗ್ರೆನೇಡ್ ಪತ್ತೆಯಾಗಿದ್ದು, ಬಳಿಕ ಅವರು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಇಳಂತಿಲ ಎಂಬಲ್ಲಿ ನಡೆದಿದೆ.

ಇಳಂತಿಲ ಗ್ರಾಮದ ನಿವಾಸಿ ಜಯಕುಮಾರ್ ಪೂಜಾರಿ
ನಿನ್ನೆ ಸಂಜೆ ಉಪ್ಪಿನಂಗಡಿಯಿಂದ ಮನೆಯ ಕಡೆಗೆ ನಡೆದುಕೊಂಡು ಬರುವಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿದ್ದು ಅದರಲ್ಲಿ ಒಂದು ಗ್ರೈನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು ಉಳಿದ ನಾಲ್ಕು ಗ್ರೇನೇಡ್ ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿದ್ದು, ಜಯಕುಮಾರ್ ಪೂಜಾರಿ ಅವರು ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಒ ಆಗಿ ನಿವೃತ್ತಿ ಹೊಂದಿರುವುದರಿಂದ ಈ ವಸ್ತುಗಳು ಗ್ರೈನೇಡ್ ಎಂಬುದಾಗಿ ಅವರಿಗೆ ತಿಳಿದುಬಂದಿದೆ.

ಈ ಗ್ರೇನೈಡ್ ಗಳನ್ನು ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತ ಅವರು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಗ್ರಾನೈಡ್ ವಸ್ತುಗಳನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಬರುವ ದಾರಿಯಲ್ಲಿ ಹಾಕಿದ್ದು, ಕೃತ್ಯ ಮಾಡಿದವರ ವಿರುದ್ದ ಸೂಕ್ತ ಕಾನುನು ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!