February 4, 2026

ವಿಟ್ಲ: ಶೋಕಮಾತಾ ದೇವಾಲಯದ ಶತಮಾನೋತ್ಸವ ಸ್ಮಾರಕ ಸಮುದಾಯ ಭವನ ಲೋಕಾರ್ಪಣೆ: ಅಭಿವೃದ್ಧಿ ಕಾರ್ಯಗಳಿಂದ ದೇವರ ಮೆಚ್ಚುಗೆ ಸಾಧ್ಯ: ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ

0
image_editor_output_image299538640-1660407205124

ವಿಟ್ಲ: ವಿಟ್ಲ ಶೋಕಮಾತಾ ದೇವಾಲಯದ ಶತಮಾನೋತ್ಸವ ಸ್ಮಾರಕ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನಡೆಯಿತು.‌

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನೂತನ ಭವನವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಅವರು ಇಲ್ಲಿ ಭವ್ಯವಾದ ಭವನ ನಿರ್ಮಾಣವಾಗಿದೆ. ಇಂತಹ ಕಾರ್ಯಗಳು ಮಾಡಿದಾಗ ಭಕ್ತರು ದೇವರ ಪ್ರೀತಿಗೆ ಪಾತ್ರಾರಾಗುತ್ತಾರೆ ಎಂದು ಹೇಳಿದರು.

ಮಂಗಳೂರು ಕ್ಷೇತ್ರದ  ಶಾಸಕ ಯು.ಟಿ ಖಾದರ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಿರ್ಮಿಸಿದ ಸಮುದಾಯ ಇದಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಇಂತಹ ಕಾರ್ಯಗಳು ಯಶಸ್ಸು ಆಗುತ್ತದೆ ಎಂದರು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ವಿಟ್ಲದ ಕೇಂದ್ರ ಸ್ಥಾನದಲ್ಲಿ ಭವನ ಅಗತ್ಯವಾಗಿದ್ದು, ಅದೀಗ ನಿರ್ಮಾಣಗೊಂಡಿದೆ. ಇದರಿಂದ ವಿಟ್ಲ ಸುತ್ತಮುತ್ತಲಿನ ಜನರಿಗೆ ತುಂಬ ಸಹಕಾರಿಯಾಗಲಿದೆ.  ಸಾಮಾಜಿಕ ಸಾಮರಸ್ಯದ ಮೂಲಕ ಜೀವನ ನಡೆಸಿದಾಗ ಜೀವನ ಉತ್ತಮವಾಗಿರುತ್ತದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಈ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಇದೀಗ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ತುಂಬ ಸಂತೋಷ ತಂದಿದೆ. ಈ ಭವನ ಎಲ್ಲರಿಗೂ ಅನುಕೂಲವಾಗಲಿದೆ. ಈ ಭವನದಿಂದ  ವಿಟ್ಲಕ್ಕೆ ಕಿರಿಟ ಬಂದಾಂತಾಗಿದೆ ಎಂದರು.

ಕಾಸ್ಸಿಯಾ ಸಂತ ರೀಟಾ ದೇವಾಲಯದ ಧರ್ಮಗುರು ಎರಿಕ್ ಕ್ರಾಸ್ತ ಮತ್ತು ವಿಟ್ಲ ಶೋಕಮಾತೆಯ ದೇವಾಲಯದ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್ ಶುಭ ಹಾರೈಸಿ, ಮಾತನಾಡಿದರು.‌

ಕಾರ್ಯಕ್ರಮದಲ್ಲಿ ಪಾಲನ ಆಯೋಗದ ಸಂಯೋಜಕ  ಲುವಿಸ್ ಮಸ್ಕರೇನಸ್, ಸಮುದಾಯ ಭವನ ಕಟ್ಟಡ ಸಮಿತಿ ಸಂಚಾಲಕರಾದ ಪೀಟರ್ ಲಸ್ರಾದೊ, ಆ್ಯಂಟನಿ ಲೋಬೋ, ಸಿ.ಎಫ್ ಸಿಕ್ವೇರಾ, ಸಮುದಾಯ ಭವನ ಕಟ್ಟಡ ಸಮಿತಿ ಕಾರ್ಯದರ್ಶಿ ರೋಬರ್ಟ್ ಮಸ್ಕರೇನಸ್ ಅವರನ್ನು ಸನ್ಮಾನಿಸಲಾಯಿತು.‌
ಭವನ ನಿರ್ಮಿಸಲು ಸಹಕಾರ ನೀಡಿದ ಗಣ್ಯರನ್ನು ಗೌರವಿಸಲಾಯಿತು.‌ ಪುತ್ತೂರು ಶಾಸಕ ಸಂಜೀವ ಮಠಂದೂರು ಆಗಮಿಸಿ ಶುಭ ಹಾರೈಸಿದರು.

ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಮನೋಹರ್ ಲ್ಯಾನ್ಸಿ ಡಿ ಸೋಜ,  ಕಾರ್ಯದರ್ಶಿ ವಿಜಯ್ ಪಾಯಸ್ ಉಪಸ್ಥಿತರಿದ್ದರು.

ಜೇಸನ್ ಪಿಂಟೊ ಮತ್ತು ಜಾಸ್ಮಿನ್ ವೇಗಸ್ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!