ಪರ್ಕಳ: ಇಲ್ಲಿನ ಹೆರ್ಗಾ ಗ್ರಾಮದ ಗೋಳಿಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿ ನಾಯಿಯನ್ನು ಕದ್ದೊಯ್ದ ಘಟನೆ ನಡೆದಿದೆ.
ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯ ಅವರ ಮನೆಯ ಸಾಕು ನಾಯಿಯನ್ನು ಕುತ್ತಿಗೆಯ ಬೆಲ್ಟ್ ಸಹಿತ ಚಿರತೆ ಕದ್ದೊಯ್ದಿದೆ. ಚಿರತೆ ನಾಯಿಯನ್ನು ಎಳೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಿಗೆ ಆತಂಕ ಸೃಷ್ಟಿಯಾಗಿದೆ.