ಮನೆ, ಮನೆ ತಿರಂಗ ಅಭಿಯಾನ: ಮೊದಲು ಮನೆ ಇಲ್ಲದವರಿಗೆ ನಿವೇಶನ ನಿರ್ಮಿಸಿಕೊಡಿ: ಯು.ಟಿ.ಖಾದರ್
ಮಂಗಳೂರು: ಮನೆ ಮನೆ ತಿರಂಗ ಅಭಿಯಾನ-ಮನೆ ಇಲ್ಲದವರಿಗೆ ನಿವೇಶನ ನಿರ್ಮಿಸಿಕೊಡಿ ಎಂದು ಎಂದು ಮಾಜಿ ಸಚಿವ ಹಾಗೂ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಭಾರತದ ದೇಶದ ರಾಷ್ಟ್ರ ಧ್ವಜಕ್ಕೆ ತಿದ್ದುಪಡಿ ಮಾಡಲಾಗಿದೆ. ಖಾದಿ ಬದಲು ಪಾಲಿಸ್ಟರ್ ಬಟ್ಟೆ ಉಪಯೋಗ ಕೇಂದ್ರದ ತೀರ್ಮಾನ ಕೈಗೊಂಡಿದೆ. ಇದು ಭಾರತದ ಸ್ವಾತಂತ್ರ್ಯ ಚಳುವಳಿ, ಆಂದೋಲನಕ್ಕೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಹಾಗೂ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಖಾದಿಗೆ ಭಾರತ ಮಾತ್ರವಲ್ಲದೆ ವಿಶ್ವದಲ್ಲೇ ವಿಶೇಷ ಮಹತ್ವ ಇದೆ. ೭೫ ನೇ ಸ್ವಾತಂತ್ರ್ಯ ಆಚರಣೆ ವೇಳೆ ಖಾದಿಗೆ ಹೆಚ್ಚಿನ ಮಹತ್ವ ನೀಡಬೇಕಿತ್ತು. ಈ ಸ್ವಾತಂತ್ರ್ಯಕ್ಕೆ ಎಲ್ಲರೂ ಖಾದಿ ಬಟ್ಟೆ ಧರಿಸಿ ಎಂಬ ಸಂದೇಶ ನೀಡಬೇಕಿತ್ತು. ಅದನ್ನು ಬಿಟ್ಟು ದೇಶದ ಧ್ವಜದ ಖಾದಿ ಬದಲಾವಣೆಗೆ ಮುಂದಾಗಿದೆ. ಮಾತನಾಡುವಾಗು ಸ್ವದೇಶಿ, ಆದರೆ ಕಾರ್ಯಗತದಲ್ಲಿ ವಿದೇಶಿಯಾಗಿದೆ.
ವಿದೇಶದಿಂದ ಆಮದಿಗೆ ಅವಕಾಶ ನೀಡಿದ್ದಾರೆ. ಯಾಕೆ ಚೈನಾಕ್ಕೆ ಲಾಭ ಆಗಲಿ ಎಂದಾ…? ಒಂದು ಕಡೆ ಚೈನದಿಂದ ತೊಂದರೆ ಇದೆ ಎಂದು ಅವರ ಎರಡು ಆ್ಯಫ್ ಬ್ಯಾನ್ ಮಾಡ್ತೀರಿ…! ಇಲ್ಲಿ ನಿಮ್ಮ ನಿಲುವಿಗೆ ಸ್ಪಷ್ಟತೆ ಇಲ್ಲ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾದಿಗೆ ಮಹತ್ವ ನೀಡುವ ಕಾರ್ಯ ಆಗಬೇಕು. ಗರ್ಗರ್ ತ್ರಿರಂಗಕ್ಕೆ ಸೂಚನೆ ನೀಡಲಾಗಿದೆ. ಒಂದು ಸ್ಪಷ್ಟತೆಯ ಆದೇಶ ನಿಲುವು ತೆಗೆದುಕೊಳ್ಳಬೇಕು. ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ ನಡೆಸಿ ಸಮರ್ಪಕ ಮಾಹಿತಿ ನೀಡಿಲ್ಲ. ಇಲ್ಲಿ ಬಂದ ಕೆಲವು ಬಾವುಟಗಳು ಪ್ರಿಂಟಿಂಗ್ ಮಿಸ್ಟೇಕ್ ಸಮಸ್ಯೆ. ರಾಷ್ಟ್ರ ಧ್ವಜದ ಮಕ್ಕಳ ಆಟಿಕೆಯಲ್ಲ. ಮನೆಮನೆಗೆ ತ್ರಿರಂಗ ಮಾಡುವ ಆದ್ರೆ ಮನೆ ಇಲ್ಲದವರು ಏನ್ ಮಾಡ್ಬೇಕು ಎಂದು ಖಾದರ್ ಪ್ರಶ್ನಿಸಿದ್ದಾರೆ.
ಇದಕ್ಕಿಂತ ಸರ್ಕಾರ ಸ್ವಾತಂತ್ರ್ಯದಂದು ಎಲ್ಲರಿಗೂ ಮನೆ ಕೊಡುವ ವ್ಯವಸ್ಥೆ ಮಾಡಲಿ. ಮನೆ ಇಲ್ಲದವರು ಸ್ವಾತಂತ್ರ್ಯ ಆಚರಣೆ ಮಾಡೋದು ಬೇಡ್ವೆ. ಸರ್ಕಾರ ಯಾರಿಗೆಲ್ಲ ಮನೆ ಇಲ್ಲ ಅವರಿಗೆ ನಿವೇಶನ ಘೋಷಿಸುವ ಕಾರ್ಯ ಮಾಡಲಿ. ಶಾಸಕರು ಕೇವಲ ಧ್ವಜದ ಮುಂದೆ ನಿಂತು ಪೋಟೋಗೆ ಪೋಸ್ ಕೊಡ್ತಾರೆ. ಪ್ರಚಾರಕ್ಕಾಗಿ ಮಾತ್ರ ರಾಷ್ಟ್ರ ಧ್ವಜ ಇವರು ಬಳಕೆ ಮಾಡ್ತಾ ಇದ್ದಾರೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪ ನಾಯಕ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.




