February 3, 2026

ಸುಟ್ಟು ಕರಕಲಾಗಿರುವ ಕಾರಿನಲ್ಲಿ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಮೃತದೇಹ ಪತ್ತೆ

0
image_editor_output_image-393188662-1660023586246.jpg

ಬೆಂಗಳೂರು: ಬೆಂಗಳೂರು ಹೊರವಲಯದ ಹೆಗ್ಗನಹಳ್ಳಿ ಕ್ರಾಸ್ ಬಳಿ ಸುಟ್ಟು ಕರಕಲಾಗಿರುವ ಕಾರೊಂದರಲ್ಲಿ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಒಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತರನ್ನು ಖಾಸಗಿ ಕಂಪನಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯಲಹಂಕದ ನ್ಯೂ ಟೌನ್ ನಿವಾಸಿ ಆರಿಫ್ ಪಾಶಾ ಎಂದು ಗುರುತಿಸಲಾಗಿದೆ.

ಹೆಗ್ಗನಹಳ್ಳಿಯ ಕ್ರಾಸ್ ಬಳಿ ದನ ಮೇಯಿಸುತ್ತಿದ್ದ ಕೆಲವರು ಸುಟ್ಟು ಕರಕಲಾಗಿರುವ ಕಾರು ಹಾಗೂ ಮೃತ ದೇಹ ಕಂಡು ವಿಶ್ವನಾಥಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ಪಾಶಾ ಗುರುತು ಪತ್ತೆ ಹಚ್ಚಲಾಗಿದೆ.

Leave a Reply

Your email address will not be published. Required fields are marked *

error: Content is protected !!