ಸಕಲೇಶಪುರ: ಕಾಡಾನೆ ದಾಳಿಗೆ ವ್ಯಕ್ತಿ ಸಾವು
ಸಕಲೇಶಪುರ: ತಾಲೂಕಿನಲ್ಲಿಒಂದೆಡೆ ಸುರಿಯುತ್ತಿರುವ ಮಳೆಯಾದರೆ, ಮತ್ತೊಂದೆಡೆ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಕಾಡಾನೆ ದಾಳಿಯಿಂದ ಅಮಾಯಕ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಸುಳ್ಳಕ್ಕಿ ಸಮೀಪ ನಡೆದಿದೆ.
ಮಂಜುನಾಥ್ ಆಲಿಯಾಸ್ ಕೆಂಪಣ್ಣ (53) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ.
ತಾಲೂಕಿನ ಸುಳ್ಳಕ್ಕಿ ಸಮೀಪದ ಮೇಲಕೆರೆಯಲ್ಲಿ ಮಂಜುನಾಥ್ ಬೆಳಗ್ಗೆ ಗದ್ದೆ ಕೆಲಸಕ್ಕೆ ಗದ್ದೆಗೆ ಹೋಗುವಾಗ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟಿದ್ದಾರೆ.




