March 20, 2026

ಉಪ್ಪಿನಂಗಡಿ: ವಾರದ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

0
IMG-20211106-WA0055

ಉಪ್ಪಿನಂಗಡಿ: ನವವಿವಾಹಿತ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಪ್ಪಿನಂಗಡಿ ಸಮೀಪದ ಕುದ್ರಡ್ಕ ಎಂಬಲ್ಲಿ ನಡೆದಿದೆ.

ಕುದ್ರಡ್ಕ ಕಲ್ಲಿನ ಕೋರೆ ಬಳಿ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ನಾಸಿರ್(27) ಎಂದು ಗುರುತಿಸಲಾಗಿದೆ.

ಕಳೆದ ಆದಿತ್ಯವಾರವಷ್ಟೇ ಮೃತ ನಾಸಿರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವಾರಗಳು ಆಗುವ ಮೊದಲೇ ವಿಧಿಗೆ ಬಲಿಯಾಗಿದ್ದಾರೆ.

ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಂದು ಕಡೆ ಕೊಲೆಯೋ? ಆತ್ಮ ಹತ್ಯೆಯೋ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ತಿಳಿಯಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!