March 26, 2026

ಸುಬ್ರಹ್ಮಣ್ಯ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಅತ್ಯಾಚಾರ, ಪ್ರಕರಣ ದಾಖಲು

0
image_editor_output_image1450765521-1659590029309.jpg

ಸುಬ್ರಹ್ಮಣ್ಯ: ವಿವಾಹಿತ ಮಹಿಳೆಯನ್ನು ಅತ್ಯಾಚಾರಗೈದು ಬಳಿಕ ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ 20ರಂದು ರಾತ್ರಿ 10 ಗಂಟೆಗೆ ಪವನ್‌ ಪಾನಮತ್ತನಾಗಿ ಬಂದು ಮಹಿಳೆ ಮೇಲೆ ಅತ್ಯಾಚಾರಗೈದಿದ್ದಾನೆ.

ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ ಎಂದಾಗ ನಾನು ನಿನ್ನನ್ನು ಮದುವೆಯಾಗುತ್ತೇನೆ. ಪೊಲೀಸ್‌ ಕಂಪ್ಲೇಟ್‌ ಕೊಡುವುದು ಬೇಡ ಎಂದು ಹೇಳಿ ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದು, ಇದಾದ ಬಳಿಕ ಮಹಿಳೆಯಿಂದ ಹಣವನ್ನು ಪಡೆದುಕೊಂಡು ಮದುವೆಯಾಗುವುದಿಲ್ಲ ಎಂದು ವಂಚಿಸಿದ್ದಾನೆ ಎಂದು ದೂರಲಾಗಿದೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!