ಎಚ್.ಡಿ ಕುಮಾರಸ್ವಾಮಿಯ ಬೆಂಗಾವಲು ವಾಹನ ರಸ್ತೆ ವಿಭಜಕಕ್ಕೆ ಢಿಕ್ಕಿ: ಐದು ಮಂದಿ ಪೊಲೀಸರಿಗೆ ಗಾಯ

ಕುಣಿಗಲ್ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ತಾಲೂಕಿನ ಎಡಿಯೂರು ಹೋಬಳಿ ರಾಷ್ಟ್ರೀಯ ಹೆದ್ದಾರಿ 75 ತಿಪ್ಪರು ಗೇಟ್ ಬಳಿ ಸಂಭವಿಸಿದೆ.
ಕುಮಾರಸ್ವಾಮಿ ಬೆಂಗಾವಲು ಪೊಲೀಸ್ ಸಿಬ್ಬಂದಿಗಳಾದ ಮಹೇಶ್, ಮಂಜುನಾಥ್ ತೀವ್ರ ವಾಗಿ ಗಾಯಗೊಂಡಿದ್ದು ಜಗದೀಶ್, ಆನಂದ್, ಹರೀಶ್ ಗೆ ಸಣ್ಣ ಪುಟ್ಟ ಗಾಯವಾಗಿದೆ.
ಮಸೂದ್ ಮತ್ತು ಸುರತ್ಕಲ್‌ನ ಪಾಝಿಲ್ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು ಇವರ ಬೆಂಗಾವಲು ಪೊಲೀಸರು ಭದ್ರತೆ ಮುಗಿಸಿಕೊಂಡು ಕಾರಿನಲ್ಲಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿರಬೇಕಾದರೆ ತಾಲೂಕಿನ ತಿಪ್ಪರು ಗೇಟ್ ಬಳಿ ಈ ಅವಘಡ ಸಂಬವಿಸಿದೆ.