July 6, 2026

ಕುಂಬಳೆ: ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಯುವಕನ ಬಂಧನ

0
image_editor_output_image533626724-1659334306151.jpg

ಕಾಸರಗೋಡು: ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ . ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಜ್ (22) ಬಂಧಿತ ಆರೋಪಿ.

ಕುಂಬಳೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ತಪಾಸಣೆ ನಡೆಸಲಾಗಿದೆ. ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ ಟೆರೇಸ್ ನಲ್ಲಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದನು.

20 ಲೀಟರ್ ನೀರಿನ ಬಾಟಲಿಯ ಮೇಲ್ಭಾಗ ವನ್ನು ಕತ್ತರಿಸಿ ಅದರಲ್ಲಿ ಮಣ್ಣು ತುಂಬಿಸಿ ಗಿಡಗಳನ್ನು ಬೆಳೆಸಲಾಗಿದೆ. ಹೀಗೆ ಮೂರು ಗಿಡಗಳನ್ನು ಪತ್ತೆ ಹಚ್ಚಲಾಗಿದೆ .ಈತ ಸ್ವಂತ ಬಳಕೆ ಅಲ್ಲದೆ ಮಾರಾಟಕ್ಕಾಗಿ ಗಾಂಜಾ ಗಿಡ ಗಳನ್ನು ಬೆಳೆಸಿ ದ್ದ ಎಂದು ತನಿಖೆ ಯಿಂದ ತಿಳಿದು ಬಂದಿದೆ .

Leave a Reply

Your email address will not be published. Required fields are marked *

You may have missed

error: Content is protected !!