March 26, 2026

ಸುರತ್ಕಲ್: ಫಾಝಿಲ್ ಹತ್ಯೆ ಪ್ರಕರಣ: ಸುರತ್ಕಲ್, ಮುಲ್ಕಿ, ಬಜಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಮೆ ಜಾರಿ

0
image_editor_output_image-550563795-1659027807893

ಸುರತ್ಕಲ್:  ಇಲ್ಲಿನ ಮಂಗಳಪೇಟೆ ನಿವಾಸಿ ಫಾಝಿಲ್(23) ಎಂಬ ಯುವಕನ ಕೊಲೆ ಜುಲೈ 28ರ ಗುರುವಾರ ರಾತ್ರಿ ವೇಳೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಸುರತ್ಕಲ್, ಮುಲ್ಕಿ, ಬಜಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಮೆ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹತ್ಯೆಯ ಬಗ್ಗೆ ತನಿಖೆ ನಡಿಸಿ ಆರೋಪಿಗಳ ಬಂಧನ ಮಾಡುತ್ತೇವೆ. ನಾಳೆಯಿಂದ ಈ ಭಾಗದಲ್ಲಿ ಮಧ್ಯದಂಗಡಿ ಬಂದ್ ಗೆ ಆದೇಶವನ್ನು ಕೂಡ ಕಮಿಷನರ್ ನೀಡಿದ್ದಾರೆ.

ಸುರತ್ಕಲ್ ಜಂಕ್ಷನ್ ನ ಎಸ್.ಕೆ ಮೊಬೈಲ್ ಅಂಗಡಿ ಮುಂಭಾಗ ಫಾಝಿಲ್(23) ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ನಾಲ್ಕರಿಂದ ಐದು ಜನ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!