ವಿಟ್ಲ: ಆಟೋ ರಿಕ್ಷಾ ಮತ್ತು ಆಕ್ಟೀವಾ ನಡುವೆ ಅಪಘಾತ: ಇಬ್ಬರಿಗೆ ಗಾಯ: ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ
ವಿಟ್ಲ: ಆಕ್ಟೀವಾಗೆ ರಿಕ್ಷಾ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕೊಡಾಜೆ-ವೀರಕಂಭ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯ ಆ ರಸ್ತೆಯಲ್ಲಿಯೇ ಚಲಿಸುತ್ತಿರುವ ವಾಹನ ಸವಾರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಇದರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಆಕ್ಟಿವಾ ಸವಾರ ಗಂಭೀರ ಗಾಯಗೊಂಡಿದ್ದು ಸಹಸವಾರ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.






