March 26, 2026

ನಾಳೆ ದ.ಕ ಜಿಲ್ಲೆಯಲ್ಲಿ ಯಾವುದೇ ಬಂದ್ ಗಳಿಲ್ಲ: ವಿಹೆಚ್ ಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸ್ಪಷ್ಟನೆ

0
image_editor_output_image-99801279-1658931418534

ಮಂಗಳೂರು, ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತ ಪ್ರವೀಣ್ ಹತ್ಯೆಯ ಬಳಿಕ ದ.ಕ. ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಸಂಗಗಳು ನಡೆಯುತ್ತಿದ್ದು ಈ ನಡುವೆ ದ.ಕ. ಜಿಲ್ಲಾ ಬಂದ್ ಕರೆ ನೀಡಲಾಗಿದೆ ಎನ್ನುವ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಆದರೆ, ಇದು ಸುಳ್ಳು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಗುರುವಾರದಂದು ದ.ಕ. ಜಿಲ್ಲೆ ಬಂದ್ ಗೆ ವಿಹೆಚ್ ಪಿ ಬಜರಂಗ ದಳ ಕರೆ ನೀಡಿದೆ ಎನ್ನುವ ವಿಚಾರವೊಂದು ಹರಿದಾಡುತ್ತಿದೆ.


ಜುಲೈ 28ರಂದು ದ.ಕ. ಜಿಲ್ಲೆಯಲ್ಲಿ ಯಾವುದೇ ರೀತಿಯ ಬಂದ್ ಗೆ ಯಾವುದೇ ಹಿಂದೂ ಸಂಘಟನೆಗಳು ಕರೆಕೊಟ್ಟಿಲ್ಲ ಎಂದು ಹಿಹೆಚ್ ಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸ್ಪಷ್ಟಪಡಿಸಿದೆ.

ಬಜರಂಗ ದಳದ ಮುಖಂಡ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಗಣೇಶ್ ಕೆದಿಲ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!