ಮದುವೆಯಾಗಿ 7 ವರ್ಷಗಳ ಬಳಿಕ ಐದು ಮಕ್ಕಳಿಗೆ ಜನ್ಮ ನೀಡಿದ ರೇಷ್ಮಾ
ರಾಜಸ್ಥಾನ; ಕರೌಲಿ ಜಿಲ್ಲೆಯ ಮಸಲ್ಪುರದ ಪಿಪ್ರಾನಿ ಗ್ರಾಮದ ಅಶ್ಕ್ ಅಲಿ ಹಾಗೂ ರೇಷ್ಮಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಮಕ್ಕಳಾಗದ ಬಗ್ಗೆ ಇವರಿಗೆ ಕೊರಗು ಇದ್ದೇ ಇತ್ತು. ಹೀಗಾಗಿ ಹಲವು ಕಡೆ ಹರಕೆಗಳನ್ನು ಹೊತ್ತಿದ್ದಾರೆ. ದೇವರಲ್ಲಿ ತಮ್ಮ ಪ್ರಾರ್ಥನೆ ನಡೆಸಿದ್ದರು.
ಇದಲ್ಲದೆ ಹಲವು ವೈದ್ಯರನ್ನು ಕೂಡ ಭೇಟಿಯಾಗಿದ್ದರು. ಈ ವೇಳೆ ಏನೂ ಪ್ರಯೋಜನವಾಗಿರಲಿಲ್ಲ.
ಈ ಬಾರಿ ಎಂದರೆ ವಿವಾಹವಾದ 7 ನೇ ವರ್ಷಕ್ಕೆ ಗರ್ಭಾವತಿಯಾಗಿ ರೇಷ್ಮಾ ಐದು ಆರೋಗ್ಯವಂತ ಮಕ್ಕಳಿಗೆ ಜೀವ ನೀಡಿದ್ದಾರೆ.
ರೇಷ್ಮಾ ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ .ಇಬ್ಬರು ಗಂಡು ಮತ್ತು 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.




