ಗುಜರಾತ್: ನಕಲಿ ಮದ್ಯ ಸೇವಿಸಿ 24 ಮಂದಿ ಸಾವು
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ಹಾಗೂ ಬೊಟಾಡ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಭಾವ್‌ನಗರದ ಐಜಿಪಿ ಅಶೋಕ್‌ಕುಮಾರ್ ಯಾದವ್ ಅವರು ನೀಡಿರುವ ಮಾಹಿತಿ ಪ್ರಕಾರ ಮೃತಪಟ್ಟವರಲ್ಲಿ 15 ಮಂದಿ ಬೊಟಾಡ ಜಿಲ್ಲೆಯವರು ಹಾಗೂ ಉಳಿದ 9 ಜನರು ಅಹಮದಾಬಾದ್‌ನ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ಪ್ರಕರಣದ ಕಿಂಗ್‌ಪಿನ್ ಹಾಗೂ ಮೆಥನಾಲ್ (ರಾಸಾಯನಿಕ) ಪೂರೈಕೆದಾರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.




