June 25, 2026

ಶಿರಾಡಿ: ವಿದ್ಯುತ್ ಶಾಕ್ ಹೊಡೆದು ರೋಫಿನ್ ಬಾಲಕ ಮೃತ್ಯು: ಮೊಬೈಲ್ ಚಾರ್ಜ್ ಮಾಡುತ್ತಿದ್ದ ವೇಳೆ ಘಟನೆ

0
image_editor_output_image1580500913-1658839321454

ನೆಲ್ಯಾಡಿ: ವಿದ್ಯುತ್ ಶಾಕ್‌ಗೆ ಒಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.೨೬ರಂದು ಸಂಜೆ ನಡೆದಿದೆ.
ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬವರ ಪುತ್ರ ರೋಫಿನ್(15)ಮೃತಪಟ್ಟ ಯುವಕ.

ಈತ ಮಧ್ಯಾಹ್ನ ಮನೆಯಲ್ಲಿ ಜಾರ್ಜ್‌ಗೆ ಇಟ್ಟ ಮೊಬೈಲ್‌ಗೆ ತೆಗೆಯುತ್ತಿದ್ದಂತೆ ಸ್ವಿಚ್ ಬೋರ್ಡ್ ಹೊರಬಂದು ವಿದ್ಯುತ್ ವಯರ್ ಕೈಗೆ ತಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ಯಿದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!