November 22, 2024

ಸುಳ್ಯ: ಸಂಕಷ್ಟದಲ್ಲಿರುವ ಬಡ ಕುಟುಂಬದವರಿಗೆ ನೆರವಿಗೆ ಧಾವಿಸುವ ಸಹೃದಯ ವ್ಯಕ್ತಿ

0

ಸುಳ್ಯ: ಇವರು ಮಡಿಕೇರಿ ನಿವಾಸಿ ಮಂಜಯ್ಯ ಲಕ್ಷ್ಮೀ ದಂಪತಿಗಳ ಪುತ್ರರಾಗಿದ್ದು ಕಳೆದ ಮೂರು ದಶಕಗಳಿಂದ ಸಾಮಾಜಿಕ, ಧಾರ್ಮಿಕ, ಕ್ರೀಡಾ, ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ನಾನಾ ರೀತಿಯ ಕೊಡುಗೆಗಳನ್ನು ನೀಡಿದವರಾಗಿದ್ದಾರೆ.

1990 ರಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ಇವರು ಕೊಡಗು ಜಿಲ್ಲೆಯ ಮಡಿಕೇರಿ ನಗರ ಸಭೆಯ ಅಧ್ಯಕ್ಷರಾಗಿ ಹತ್ತು ವರ್ಷ, ಪುರಸಭೆಯ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದವರು.
ಕಾಂಗ್ರೆಸ್ ಪಕ್ಷದ ನಾಯಕರಾಗಿ ಗುರುತಿಸಿರುವ ಇವರು ತಮ್ಮ ಸೇವಾ ಕಾರ್ಯದಲ್ಲಿ ಬಂದಾಗ ರಾಜಕೀಯವನ್ನು ಬದಿಗಿಟ್ಟು ಬಡವರ, ಶೋಷಿತರ, ಅನಾಥರ, ನಿರ್ಗತಿಕರ ಸೇವೆಗಾಗಿ ತಮ್ಮ ಬಳಿ ಸಾಧ್ಯವಾಗುವ ರೀತಿಯಲ್ಲಿ ಸಹಾಯ ಹಸ್ತವನ್ನು ನೀಡಿ ಸಹಕರಿಸುವ ಮನೋಭಾವ ಉಳ್ಳವರಾಗಿದ್ದಾರೆ.

ಇದೀಗ ಕಳೆದ ಮೂರು ವರ್ಷಗಳಿಂದ ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಇವರ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿ ಎರಡು ತಾಲೂಕಿನಲ್ಲಿ ಜನತೆಯ ಪರಿಚಿತರಾಗಿ ಬೆಳೆಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಕೋವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತರು, ಪತ್ರಕರ್ತರು, ಗೃಹರಕ್ಷಕ ದಳದವರು, ಪೌರಕಾರ್ಮಿಕರು, ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಾರಿಯರ್ಸ್ಗಳಿಗೆ ಸುಮಾರು 10 ಲಕ್ಷ ರೂಪಾಯಿಗಳ ಅನುದಾನಗಳ ಮೂಲಕ ಅಗತ್ಯ ವಸ್ತುಗಳ ಕಿಟ್ಟು ಗಳನ್ನು ನೀಡಿ ಸಹಕರಿಸಿದವರು.

ತಾಲೂಕಿನ ವಿವಿಧ ಗ್ರಾಮಗಳಿಗೆ ರಸ್ತೆ ದುರಸ್ತಿ ಕಾರ್ಯಕ್ಕೆ ಎಂಎಲ್ಸಿ ಫಂಡುಗಳಿಂದ, ಮತ್ತು ಸ್ವತಹ ತಮ್ಮ ಕೈಯಿಂದ ಖರ್ಚುವಹಿಸಿ ರಸ್ತೆ ಕಾಮಗಾರಿಗಳಿಗೆ ಅನುದಾನವನ್ನು ನೀಡುತ್ತಾ ಬರುತ್ತಿದ್ದಾರೆ.
ಅದೇ ರೀತಿ ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧಡೆ ಹೈಮಾಕ್ಸ್ ಲೈಟ್ ಅಳವಡಿಕೆ, ಸೋಲಾರ್ ಲೈಟ್ ಅಳವಡಿಕೆ, ಆಟೋ ನಿಲ್ದಾಣಗಳಿಗೆ ಇಂಟರ್ಲಾಕ್ ಅಳವಡಿಕೆ ಮುಂತಾದ ಯೋಜನೆಗಳಿಗೆ 15 ಲಕ್ಷ ರೂಪಾಯಿಗಳಿಗೂ ಮಿಕ್ಕ ಯೋಜನೆಗಳನ್ನು ಜನತೆಗೆ ನೀಡಿ ಜನರ ಕಷ್ಟಕ್ಕೆ ಸ್ಪಂದನೆಯನ್ನು ನೀಡಿದ್ದಾರೆ.

ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತವನ್ನು ನೀಡುತ್ತಾ, ಮನೆ ನಿವೇಶನ ಮುರಿದು ಬೀಳುವ ಪರಿಸ್ಥಿತಿಯಲ್ಲಿ ಇದ್ದವರನ್ನು ಗಮನಿಸಿ ಸಹಾಯ ಹಸ್ತವನ್ನು ನೀಡಿ ಇದೀಗ ಎರಡು ತಾಲ್ಲೂಕುಗಳಲ್ಲಿ ಮನೆ ಮಾತಾಗಿರುವ ನಂದಕುಮಾರ್ ರವರು ಸದ್ದಿಲ್ಲದೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯುತ್ತಾ ಬರುತ್ತಿದ್ದಾರೆ.
ಇವರ ಮುಂದಿನ ರಾಜಕೀಯ ವೃತ್ತಿಯಲ್ಲಿ ಸಮಾಜಕ್ಕೆ ಇನ್ನೂ ಉತ್ತಮ ಸೇವೆಗಳನ್ನು ಸಲ್ಲಿಸುವ ಅವಕಾಶಗಳು ಒದಗಿ ಬರಲಿ ಎಂದು ಇವರ ಅಭಿಮಾನಿ ಬಳಗದವರು ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!