ಝಮೀರ್ ಅಹ್ಮದ್ ಖಾನ್ ಮುಂಬರುವ ದಿನಗಳಲ್ಲಿ ಸಿಎಂ ಆಗುತ್ತಾರೆ: ವಿರಕ್ತಮಠದ ಪಂಚಾಕ್ಷರಿ ಸ್ವಾಮಿಜಿ
ಬೆಳಗಾವಿ: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಬಡಿದಾಟ ಜೋರಾಗಿರುವಾಗಲೇ ವಿರಕ್ತಮಠದ ಪಂಚಾಕ್ಷರಿ ಸ್ವಾಮಿಗಳು ಜಮೀರ್ ಅಹ್ಮದ್ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಮುಂಬರುವ ದಿನಗಳಲ್ಲಿ ಸಿಎಂ ಆಗುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಯಕ್ಕುಂಡಿ ಗ್ರಾಮದ ದೀಲಾವರ್ ದರ್ಗಾದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಕುಂಡಿ ಗ್ರಾಮದ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿದ್ದು, ಶಂಕರ ಪಾಟೀಲ್ ಅವರಿಂದ ದರ್ಗಾ ಅಭಿವೃದ್ಧಿಯಾಗಿದೆ. ಬೆಂಗಳೂರಿನಿಂದ ದರ್ಗಾಕ್ಕೆ ಮಾಜಿ ಸಚಿವರು ಝಮೀರ್ ಅಹ್ಮದ್‍ಖಾನ್ ಬಂದಿದ್ದಾರೆ. ಹಾಗಿರುವಾಗ ಇದರ ಶಕ್ತಿ ಎಷ್ಟಿದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ.




