August 25, 2026

ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ

0
Screenshot_20220723-060032_UC-Browser.jpg

ಮಂಗಳೂರು: ಸ್ಕಾರ್ಪಿಯೋ ಕಾರೊಂದು ಬೆಂಕಿಗಾಹುತಿಯಾದ ಘಟನೆ ನಗರದ ಕೆಪಿಟಿ ವೃತ್ತದ ಸಮೀಪ ನಡೆದಿದೆ.

ಸ್ಕಾರ್ಫಿಯೋ ಕಾರು ನಗರದ ಕುಂಟಿಕಾನದಿಂದ ನಂತೂರು ಕಡೆಗೆ ಚಲಿಸುತ್ತಿದ್ದ ಸಂದರ್ಭ ಕೆಪಿಟಿ ವೃತ್ತದ ಸಮೀಪ ತಲುಪುತ್ತಿದ್ದಂತೆ ಏಕಾಏಕಿ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಅಲರ್ಟ್ ಆದ ಚಾಲಕ ವಾಹನವನ್ನು ಬದಿಗೆ ಸರಿಸಿದ್ದಾರೆ.

ಇನ್ನು ನಿತ್ಯ ಸಂಚಾರ ದಟ್ಟಣೆ ಇರುವ ಈ ಭಾಗದಲ್ಲಿ ಟ್ರಾಫಿಕ್ ಪೊಲೀಸ್ ವಾಹನವನ್ನು ಬದಿಗೆ ಸರಿಸಲು ನೆರವಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಂಜಿನ್ ನಲ್ಲಿ ಬೆಂಕಿಕಾಣಿಸಿಕೊಂದಿದ್ದು, ಸಂಪೂರ್ಣ ಅಗ್ನಿಗಾಹುತಿಯಾಗುವ ಮೊದಲೇ ಅಗ್ನಿಶಾಮಕ ದಳ ಸ್ಥಳಕ್ಕಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!