March 28, 2026

ಅವಿವಾಹಿತ ಮಹಿಳೆಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ

0
image_editor_output_image-27264121-1658469419450.jpg

ಹೊಸದಿಲ್ಲಿ: ಮಹತ್ವದ ಆದೇಶವೊಂದರಲ್ಲಿ, ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಿದ ಸುಪ್ರೀಂ ಕೋರ್ಟ್, ಕಾಯ್ದೆಯೊಳಗೆ ‘ಅವಿವಾಹಿತ ಮಹಿಳೆ’ಯನ್ನು ಸೇರಿಸಲು ಒಪ್ಪಿಗೆ ನೀಡಿದೆ.

ಅಲ್ಲದೆ ಪ್ರಕರಣವೊಂದರಲ್ಲಿ ಅವಿವಾಹಿತ ಮಹಿಳೆಗೆ ತನ್ನ 24 ವಾರಗಳ ಗರ್ಭವನ್ನು ಕೊನೆಗೊಳಿಸಲು (ಗರ್ಭಪಾತ) ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ಎಎಸ್ ಬೋಪಣ್ಣ ಅವರ ಪೀಠವು ಶುಕ್ರವಾರದೊಳಗೆ ಮಹಿಳೆಯನ್ನು ಪರೀಕ್ಷಿಸಲು ಇಬ್ಬರು ವೈದ್ಯರ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ಎಐಐಎಂಎಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ಎಂಟಿಪಿ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗರ್ಭಾವಸ್ಥೆಯನ್ನು ಕೊನೆಗೊಳಿಸಿದರೆ ಅದು ಮಹಿಳೆಯ ಜೀವಕ್ಕೆ ಅಪಾಯವನ್ನುಂಟು ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಿ ಎಂದು ಮಂಡಳಿಗೆ ಸೂಚಿಸಿದೆ.

2021 ರಲ್ಲಿ ತಿದ್ದುಪಡಿ ಮಾಡಲಾದ ಎಂಟಿಪಿ ಕಾಯ್ದೆಯ ನಿಬಂಧನೆಗಳು ಸೆಕ್ಷನ್ 3 ರ ವಿವರಣೆಯಲ್ಲಿ “ಪತಿ” ಬದಲಿಗೆ ” ಪಾಲುದಾರ” (ಪಾರ್ಟ್ನರ್) ಪದವನ್ನು ಒಳಗೊಂಡಿವೆ ಎಂದು ಪೀಠವು ಹೇಳಿದೆ.

ಇದು ಕೇವಲ ವೈವಾಹಿಕ ಸಂಬಂಧಗಳಿಂದ ಉಂಟಾಗುವ ಸನ್ನಿವೇಶಗಳಿಗೆ ಸೀಮಿತಗೊಳಿಸಬಾರದು ಎಂಬ ಸಂಸತ್ತಿನ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್ ಗುರುವಾರ ಅಭಿಪ್ರಾಯ ಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!