August 25, 2026

ವಿಟ್ಲ: ವೀರಕಂಬ ಗ್ರಾ.ಪಂ ಸಾಮಾನ್ಯ ಸಭೆ ರದ್ದು: ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಸಭೆಗೆ ಗೈರು

0
image_editor_output_image224899669-1658416008323

ವಿಟ್ಲ: ವೀರಕಂಬ ಪಂಚಾಯಿತಿಯಲ್ಲಿ ಚುನಾಯಿತ 14ಸದಸ್ಯರಿದ್ದು, ಗುರುವಾರ ನಿಗದಿಯಾಗಿದ್ದ, ಸಾಮಾನ್ಯ ಸಭೆ ಕೋರಂ ಇಲ್ಲದ ಕಾರಣಕ್ಕೆ ಮುಂದೂಡಲಾಗಿದೆ.

ಇಂದು ಬೆಳಿಗ್ಗೆ ಪ್ರತಿ ತಿಂಗಳಿನಂತೆ ಈ ಬಾರಿಯೂ ವೀರಕಂಬ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆ ಕರೆಯಲಾಗಿತ್ತು. ಕಾಂಗ್ರೆಸ್ ಬೆಂಬಲಿತ ಏಳು ಮಂದಿ ಸದಸ್ಯರು ಗೈರು ಹಾಜರಾಗಿದ್ದರು.

ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರನ್ನು ಬೇಟಿ ಮಾಡಿದ ವೀರಕಂಬ ಪಂಚಾಯಿತಿ ಸದಸ್ಯರ ತಂಡ ಕಾರಣ ನೀಡದೆ ಯಾವುದೇ ದೂರುಗಳಿಲ್ಲದ್ದ, 13 ವರ್ಷಗಳಿಂದ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಟರ್ ಮೆನ್ ಅನ್ನು ಏಕಾಏಕಿ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ಯಾವುದೇ ಸೂಚನೆ ನೀಡದೇ ಅಧ್ಯಕ್ಷ ಮತ್ತು ಪಿಡಿಓ ಅವರು ಸ್ವತಃ ನಿರ್ಣಯ ಮಾಡಿ ತೆಗೆದುಹಾಕಲಾಗಿದೆ ಎಂದು ಸದಸ್ಯರು ದೂರಿದ್ದಾರೆ. ಈ ಬಗ್ಗೆ ಸದಸ್ಯರು ಕಾರ್ಯನಿರ್ವಣಾಧಿಕಾರಿ ಅವರಿಗೆ ದೂರು ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಕಾರಣ ಕೇಳಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!