ವಿಮಾನ ನಿಲ್ದಾಣದಲ್ಲಿ ಸಣ್ಣ ವಿಮಾನಗಳ ನಡುವೆ ಢಿಕ್ಕಿ: ನಾಲ್ವರು ಸಾವು
ಲಾಸ್ ವೇಗಾಸ್: ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಭಾನುವಾರ ಮಧ್ಯಾಹ್ನದ ಸುಮಾರಿಗೆ ಸಿಂಗಲ್ ಇಂಜಿನ್ ಪೈಪರ್ ಪಿಎ-46 ಮತ್ತು ಸಿಂಗಲ್ ಇಂಜಿನ್ ಸೆಸ್ನಾ 172 ಡಿಕ್ಕಿ ಹೊಡೆದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ ಎಎ) ತಿಳಿಸಿದೆ.
” ಪೈಪರ್ ಪಿಎ-46 ವಿಮಾನ ಲ್ಯಾಂಡ್ ಆಗುತ್ತಿದ್ದಾಗ ಸೆಸ್ನಾ 172ಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ” ಎಂದು ಎಫ್ ಎಎ ಹೇಳಿಕೆಯಲ್ಲಿ ತಿಳಿಸಿದೆ. “ಪೈಪರ್ ಅಪಘಾತಕ್ಕೀಡಾಗಿ ಪೂರ್ವದಲ್ಲಿ ಮೈದಾನದಕ್ಕೆ ಬಿದ್ದರೆ, ಸೆಸ್ನಾ ನೀರು ಹಿಡಿದಿಟ್ಟುಕೊಳ್ಳುವ ಕೊಳಕ್ಕೆ ಬಿದ್ದಿತು” ಎಂದು ಹೇಳಿಕೆ ತಿಳಿಸಿದೆ.




