ಪುತ್ತೂರು: ಕಾಲೇಜಿನ ಬಳಿ ಗಾಂಜಾ ಮಾರಾಟಕ್ಕೆ ಯತ್ನ: ಕೇರಳ ಮೂಲದ ಯುವಕ ವಶಕ್ಕೆ
ಪುತ್ತೂರು: ಕಾಲೇಜಿನ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ
ವ್ಯಕ್ತಿಯೊರ್ವನನ್ನು ಗಾಂಜಾ ಸಹಿತ ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನ ಖಾಸಗಿ ಕಾಲೇಜಿನ ಬಳಿ ನಡೆದಿದೆ.
ಬಂಧಿತ ಆರೋಪಿಯನ್ನು ಕೇರಳ ಮೂಲದ ಕಾಟಕ್ಕಾಡು ನಿವಾಸಿ ಮೋಬಿನ್ ಜೋರ್ಜ್(20) ಎಂದು ಗುರುತಿಸಲಾಗಿದೆ.
ಖಾಸಗಿ ಕಾಲೇಜೊಂದರ ಬಳಿಯಿರುವ ಬಸ್ ನಿಲ್ದಾಣದ ಬಳಿ
ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಪೊಲೀಸರಿಗೆ
ಮಾಹಿತಿ ದೊರೆತಿದ್ದು, ಈ ಹಿನ್ನೆಲೆ ಸ್ಥಳಕ್ಕಾಗಮಿಸಿದ ಪೊಲೀಸರು ಮೋಬಿನ್ ಜೋರ್ಜ್ ನನ್ನು ಬಂಧಿಸಿ, ಆತನಿಂದ ಗಾಂಜಾ ಸಹಿತ
10,050 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 64/2022 ಕಲಂ: 8(ಸಿ),20 (b) (ii)B NDPS ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ..




