February 3, 2026

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ದನಗಳು ಬೆಂಕಿಗಾಹುತಿ

0
image_editor_output_image-1286531225-1657949491250.jpg

ಹುಣಸೂರು: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಮೂರು ದನಗಳು ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಮುಳ್ಳೂರಿನಲ್ಲಿ ನಡೆದಿದೆ.

ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಗ್ರಾಮದ ನಿವಾಸಿ ಜಯಮ್ಮ ಅವರಿಗೆ ಸೇರಿದ ಹಸುಗಳು ಸಾವನ್ನಪ್ಪಿದ್ದು, ಸುಮಾರು 3 ಲಕ್ಷರೂ ನಷ್ಟ ಸಂಭವಿಸಿದೆ.

ಎಂದಿನಂತೆ ಸೊಳ್ಳೆಗಾಗಿ ಪಾತ್ರೆಯಲ್ಲಿ ಸ್ವಲ್ಪ ಬೆಂಕಿ ಹಾಕಿ ಮಲಗಿದ್ದರು. ಗಾಳಿಯಿಂದ ಬೆಂಕಿ ಕಿಡಿ ಕೊಟ್ಟಿಗೆಯ ಮೇಲ್ಛಾವಣಿಗೆ ಹಾರಿ ಬೆಂಕಿ ಹತ್ತಿಕೊಂಡಿದ್ದು. ಮನೆಯವರು ಎಚ್ಚರಗೊಳ್ಳುವಷ್ಟರಲ್ಲಿ ಬೆಂಕಿ ಇಡೀ ಕೊಟ್ಟಿಗೆಗೆ ವ್ಯಾಪಿಸಿದ್ದಲ್ಲದೆ, ಕೊಟ್ಟಿಗೆಯಲ್ಲಿದ್ದ ಹಸುಗಳು ಸಾವನ್ನಪ್ಪಿದೆ.

Leave a Reply

Your email address will not be published. Required fields are marked *

error: Content is protected !!