July 6, 2026

ಸರ್ಕಾರಿ ಕಚೇರಿಗಳಲ್ಲಿ ಫೋಟೋ/ವೀಡಿಯೋ ನಿಷೇಧ: ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂಪಡೆದ ರಾಜ್ಯ ಸರಕಾರ

0
image_editor_output_image1929125632-1657949062011.jpg

ಬೆಂಗಳೂರು: ಸರ್ಕಾರಿ ಇಲಾಖೆಗಳ ಕಚೇರಿ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವೀಡಿಯೋ ತೆಗೆಯುವಂತಿಲ್ಲ ಎಂಬ ಆದೇಶವನ್ನು ಬೊಮ್ಮಾಯಿ ಸರ್ಕಾರ ಶುಕ್ರವಾರ ತಡರಾತ್ರಿ ಹಿಂತೆಗೆದುಕೊಂಡಿದೆ. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ವಾಪಾಸ್ ಪಡೆಯಲಾಗಿದೆ.

ಸರ್ಕಾರಿ ಇಲಾಖೆಗಳ ಕಚೇರಿ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ವೀಡಿಯೋ, ಫೋಟೋ ತೆಗೆಯುವುದರಿಂದ ನೌಕರರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳು ಫೋಟೋ/ವೀಡಿಯೋ ತೆಗೆಯುವಂತಿಲ್ಲ ಎಂಬುದಾಗಿ ಶುಕ್ರವಾರ ಮಧ್ಯಾಹ್ನ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ ಸರ್ಕಾರದ ಆದೇಶ ಹೊರ ಬರುತ್ತಿದ್ದಂತೆ ವಿಪಕ್ಷಗಳು ಮಾತ್ರವಲ್ಲದೆ ಸ್ವಪಕ್ಷೀಯರಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡುವಂತಹ ಆದೇಶ ಇದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಇಂತಹ ಆದೇಶದಿಂದ ಇಲಾಖೆಗಳ ಪಾರದರ್ಶಕ ಸೇವೆಗೆ ಚ್ಯುತಿ ಬರುತ್ತದೆ ಎಂದು ಬರೆದುಕೊಂಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!