February 2, 2026

ವಿಟ್ಲದಲ್ಲಿ ಮತ್ತೆ ಬಾಕ್ಸೈಟ್‌ ಲಾರಿಗಳ ಅಟ್ಟಾಹಾಸ: ಲಾರಿಗಳ ವಿರುದ್ಧ ಭಾರೀ ಜನಾಕ್ರೋಶ

0
IMG-20220713-WA0002.jpg

ವಿಟ್ಲ: ಕಳೆದು ಹಲವು ಸಮಯಗಳಿಂದ ನೆರೆ ರಾಜ್ಯ ಕೇರಳದಿಂದ ಆಂಧ್ರ ಪ್ರದೇಶಕ್ಕೆ ಬೃಹತ್ ಲಾರಿಗಳಲ್ಲಿ ಬಾಕ್ಸೈಟ್‌ ಸಾಗಿಸುತ್ತಿದ್ದು ಜನರನ್ನು ನಿದ್ದೆಗಡೆಸುವಂತಾಗಿದೆ. ಈ ಲಾರಿ ಚಾಲಕರ ಅತಿ ವೇಗ, ನಿರ್ಲಕ್ಷ್ಯದ ಚಾಲನೆಯಿಂದ ಜನರು ಹೈರಾಣ ಆಗಿದ್ದಾರೆ.

ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಕನ್ಯಾನ-ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಯಾವ ಕ್ಷಣ ಯಾರ ಪ್ರಾಣ ಬಲಿ ಪಡೆಯುತ್ತೋ ಎಂಬ ಆತಂಕ ವ್ಯಕ್ತವಾಗಿದೆ. ದಿನದ 24ಗಂಟೆಯೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಭಾರೀ ಸರಕು ಸಾಗಾಟದ ಬಾಕ್ಸೈಟ್ ತುಂಬಿದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ.

ವಿಟ್ಲ ಹೊರವಲಯದ ಮಂಗಲಪದವು ಎಂಬಲ್ಲಿ ಪ್ರತಿನಿತ್ಯ ಬಾಕ್ಸೈಟ್ ಲಾರಿಗಳು ಹೂತು ನರಳಾಡುತ್ತಿವೆ. ಲಾರಿಯನ್ನು ಮೇಲೆತ್ತುವುದಕ್ಕಾಗಿ ಜೆಸಿಬಿ ಯಂತ್ರಗಳು ಬಂದು ಲಾರಿಯಲ್ಲಿರುವ 50-60ಟನ್ ಬಾಕ್ಸೈಟ್ ಮಣ್ಣನ್ನು ರಸ್ತೆಯಲ್ಲೇ ಖಾಲಿ ಮಾಡುತ್ತಿವೆ. ಇದರಿಂದಾಗಿ ಮಂಗಲಪದವು ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು ಇತರ ವಾಹನಗಳು ಸಂಚರಿಸುವುದು ಅಸಾಧ್ಯವಾಗಿದೆ. ಗಣಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜಾಣ ಕುರುಡು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ..

Leave a Reply

Your email address will not be published. Required fields are marked *

error: Content is protected !!