ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಹೊಳೆಯಲ್ಲಿ ಪತ್ತೆ
ವಿಟ್ಲ: ಹೊಳೆಯಲ್ಲಿ ಮೃತದೇಹವೊಂದು ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ.
ಹೊಳೆಯಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಜು.11 ರಂದು ನಾಪತ್ತೆಯಾಗಿದ್ದ ಕುಶಾಲಕ್ಷ ಎಂದು ಹೇಳಲಾಗುತ್ತಿದೆ.
ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಬಾಬು ನಾಯ್ಕ ರವರ ಮಗ ಕುಶಾಲಕ್ಷ(42) ಎಂದು ಗುರುತಿಸಲಾಗಿದ್ದು, ಅವರು ಜು.11 ರಂದು ಮನೆಯಿಂದ ತೆರಳಿದವರು ಮತ್ತೆ ಮನೆಗೆ ಬಾರದೆ ನಾಪತ್ತೆಯಾಗಿದ್ದರು.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಮೃತರು ಹೆಂಡತಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.




