ಬಂಟ್ವಾಳ: ನೇತ್ರಾವತಿ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ: ಅಜಿಲಮೊಗರು ನದಿ ಬದಿಯಲ್ಲಿ ಮೊಸಳೆ ವೀಡಿಯೋ ವೈರಲ್
ಬಂಟ್ವಾಳ: ಕಳೆದ ಕೆಲ ದಿನಗಳ ಹಿಂದೆ ಮೊಸಳೆ ಮರಿ ನದಿಯಲ್ಲಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬೆನ್ನಲ್ಲೆ ದೊಡ್ಡ ಗಾತ್ರದ ಮೊಸಳೆ ಇರುವ ಬಗ್ಗೆ ಮತ್ತೆ ವಿಡಿಯೋ ವೈರಲ್ ಆಗಿದೆ.
ನೇತ್ರಾವತಿ ನದಿಯಲ್ಲಿ ಮೊಸಳೆ ಇದೆ ಈಜಲು ಹೋಗುವವರು ಅಥವಾ ನದಿ ಬದಿಗೆ ಹೋಗುವವರು ಹೆಚ್ಚಿನ ಜಾಗೃತೆ ವಹಿಸುವಂತೆ ಹೇಳಿದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ನೇತ್ರಾವತಿ ನದಿಯಲ್ಲಿ ಮೊಸಳೆ ಕಂಡು ನದಿ ಬದಿಯ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಬಂಟ್ವಾಳ ಸರಪಾಡಿ ಸಮೀಪದ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನದಿ ಬದಿಯಲ್ಲಿ ಈ ಮೊಸಳೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಯುವಕರು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಒಂದು ವಾರಗಳ ಹಿಂದೆ ಇದೇ ಪರಿಸರದ ಲ್ಲಿ ಸಣ್ಣ ಮರಿಮೊಸಳೆಯ ಇರುವುದು ಕಂಡು ಬಂದಿದ್ದು, ಇದೀಗ ದೊಡ್ಡ ಮೊಸಳೆ ಇರುವುದು ಕಂಡು ಬಂದಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.




