ಕಾಣಿಯೂರು: ಬೈತಡ್ಕ ಹೊಳೆಯಲ್ಲಿ ಕಾರು ಮುಳುಗಿ ಇಬ್ಬರು ನಾಪತ್ತೆ ಪ್ರಕರಣ: ವಿಟ್ಲ ನಿವಾಸಿ ಧನುಷ್ ನಾಪತ್ತೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಟ್ಲ: ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾಗಿದ್ದು, ಅವರ ಪೈಕಿ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ನಿವಾಸಿ ಧನುಷ್ ಎಂಬಾತ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿಯ ಹೊಳೆಗೆ ಕಾರೊಂದು ಉರುಳಿ ಬಿದ್ದಿರುವ ಬಗ್ಗೆ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು. ಬಳಿಕ ಹೊಳೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಕಾರು ಮಾತ್ರ ಪತ್ತೆಯಾಗಿದ್ದು, ಅದರಲ್ಲಿದ್ದ ವ್ಯಕ್ತಿಗಳು ನಾಪತ್ತೆಯಾಗಿದ್ದರು. ಬಳಿಕ ಅವರ ಪತ್ತೆಗಾಗಿ ಶೋಧ ಕಾರ್ಯ ಪ್ರಾರಂಭಿಸಲಾಗಿತ್ತು.
ಈ ಬಗ್ಗೆ ಧನುಷ್ ಅವರ ತಂದೆ ಚೋಮ ನಾಯ್ಕ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಧನುಷ್(25)/ ವರ್ಷ ಎಂಬಾತನು ನಿನ್ನೆ ದಿನಾಂಕ:09-07-2022 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಶಾಂತಿಯಡ್ಕ ಎಂಬಲ್ಲಿರುವ ಮನೆಯಿಂದ ತನ್ನ ಮಾರುತಿ ಕಾರಿನಲ್ಲಿ ಕನ್ಯಾನದ ಧನುಷ್ ಎಂಬವರು ವಿಟ್ಲ, ಕಡಂಬು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು. ನಂತರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿರುತ್ತದೆ. ಈ ವರೆಗೆ ಮಗ ಮನೆಗೆ ಬಂದಿರುವುದಿಲ್ಲ. ನಂತರ ಕಾಣೆಯಾದ ಮಗ ಧನುಷನ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಮನೆಗೂ ಬಾರದೆ ಸಂಬಧಿಕರ ಹಾಗೂ ಗೆಳೆಯರ ಮನೆಗೂ ಹೋಗದೆ ಕಾಣೆಯಾಗಿರುವ ಮಗ ಧನುಷ್ ನನ್ನು ಪತ್ತೆ ಮಾಡಿ ಕೊಡಬೇಕೆಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.




