ಐವರ್ನಾಡು ವಿದ್ಯುತ್ ಶಾಕಿನಿಂದ ಮೃತಪಟ್ಟ ಬಾಲಕನ ಮನೆಗೆ ಮುಸ್ಲಿಂ ಮುಖಂಡರ ಭೇಟಿ
ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಐವರ್ನಾಡಿನ 4 ವರ್ಷದ ಬಾಲಕ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದು ಆತನ ಮನೆಗೆ ಸುಳ್ಯತಾಲೂಕು ಮಸ್ಜಿದ್ ಸಮನ್ವಯ ಸಮಿತಿಯ ಮುಖಂಡರುಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

ನಂತರ ಘಟನೆ ನಡೆದ ಸ್ಥಳವನ್ನು ವೀಕ್ಷಣೆ ನಡೆಸಿ ಮೃತ ಬಾಲಕನ ಅಜ್ಜ ಆದಂರವರಿಂದ ದುರ್ಘಟನೆಯ ಬಗ್ಗೆ ಪೂರ್ಣ ಮಾಹಿತಿ ಪಡೆದು ಕೊಂಡರು. ನಂತರ ಸಮಿತಿಯ ಸಂಚಾಲಕ ಹಾಜಿ ಕೆಎಂ ಮುಸ್ತಫ ಜನತಾ ಸುದ್ದಿಯೊಂದಿಗೆ ಮಾತನಾಡಿ ಸಮಿತಿಯ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ನೀಡಿ ಮೃತ ಬಾಲಕನ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ದಡಿಯಲ್ಲಿ ಅನುದಾನ ನೀಡಲು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಘಟನೆ ಸಂಭವಿಸಿದ ಸಂದರ್ಭದಲ್ಲಿ ಈ ಭಾಗದ ಹಲವಾರು ಮನೆಗಳಲ್ಲಿ ವಿದ್ಯುತ್ ಸಮಸ್ಯೆ ಕಂಡು ಬಂದಿದ್ದು ಮೆಸ್ಕಾಂ ಇಲಾಖೆಗೆ ಘಟನೆಯ ಬಗ್ಗೆ ಮರುತನಿಕೆ ನಡೆಸುವಂತೆ ಆಗ್ರಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಆದಂ ರವರು ತಮ್ಮ ಜಮೀನಿಗೆ ನಡೆಸುವ ಕಾನೂನು ಹೋರಾಟದ ಬಗ್ಗೆ ಮಾಹಿತಿ ಪಡೆದ ಅವರು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಹಾಜಿ ಇಬ್ರಾಹಿಂ ಕತರ್ ಮಂಡೆಕೋಲು, ಇಕ್ಬಾಲ್ ಎಲಿಮಲೆ, ಕೆ ಎಸ್ ಉಮ್ಮರ್, ಹಸೈನಾರ್ ಜಯನಗರ ಉಪಸ್ಥಿತರಿದ್ದರು.




