August 25, 2026

ಮರವೂರು ಸೇತುವೆ ಮೇಲೆ ಮೋಟಾರ್‌ ಬೈಕ್ ಕೀ ಸಹಿತ ಪತ್ತೆ, ಆತ್ಮಹತ್ಯೆ ಶಂಕೆ

0
image_editor_output_image-1113606169-1657086831404.jpg

ಮಂಗಳೂರು: ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಮೇಲೆ ಬುಧವಾರ ಬೆಳಗ್ಗೆ ಮೋಟಾರ್‌ ಬೈಕೊಂದು ಕೀ ಮತ್ತು ಹೆಲ್ಮೆಟ್ ಸಹಿತ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ ವೇಳೆಗೆ ಈ ಬೈಕ್‌ ಸೇತುವೆ ಮೇಲಿತ್ತು. ಕೀ ಮತ್ತು ಹೆಲ್ಮೆಟ್ ಕೂಡಾ ಬೈಕ್‌ನಲ್ಲಿ ಇದ್ದು, ಸಮಯ ಕಳೆದರೂ ಯಾರೂ ಬೈಕ್ ಕೊಂಡೊಯ್ಯಲು ಬಂದಿಲ್ಲ. ಹೀಗಾಗಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬೈಕ್‌ನ್ನು ಸೇತುವೆ ಮೇಲೆ ಪಾರ್ಕ್ ಮಾಡಿ ಬೈಕ್‌ ಸವಾರ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!