ವಿಟ್ಲ ರೋಟರಿ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ
ವಿಟ್ಲ: ವಿಟ್ಲ ರೋಟರಿ ಕ್ಲಬ್ ನ ಪ್ರಥಮ ಸಾಮಾನ್ಯ ಸಭೆಯನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಕ್ಲಬ್ ನ ಸದಸ್ಯರಾದ ಡಾ.ವಿ.ಕೆ.ಹೆಗ್ಡೆ ಮತ್ತು ಡಾ.ಚರಣ್ ಕಜೆ ಹಾಗೂ ವಿಟ್ಲದ ಯುವ ವೈದ್ಯರಾದ ಡಾ.ದುರ್ಗಾಪ್ರಸಾದ್ ರವರನ್ನು ಕ್ಲಬ್ ನ ವತಿಯಿಂದ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ವಿ.ಕೆ ಹೆಗ್ಡೆ ಯವರನ್ನು ರೋ.ರಶೀದ್ ವಿಟ್ಲ,ಡಾ.ಚರಣ್ ಕಜೆಯವರನ್ನು ರೋ.ಮೋಹನ್ ಎಂ.ಹಾಗೂ ಡಾ.ದುರ್ಗಾ ಪ್ರಸಾದ್ ರವರನ್ನು ರೋ.ರಮೇಶ್ ಬಿ ಕೆ ಮೂವರು ಪರಿಚಯಿಸಿದರು. IPP ರೋ.ಅಣ್ಣಪ್ಪ ಸಾಸ್ತಾನ ರವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷರಾದ ರೋ.ಭಾಸ್ಕರ್ ಶೆಟ್ಟಿ,ಪೂರ್ವಾಧ್ಯಕರಾದ ರೊ.ವಸಂತ ಶೆಟ್ಟಿ,ರೋ.ಜಯರಾಮ ರೈ,ರೊ.ಸಂಜೀವ ಎಂ ಹಾಗೂ ಸದಸ್ಯರಾದ ರೊ.ಕ್ಲೀಫರ್ಡ್ ವೇಗಸ್,ರೊ.ಪಿ.ಕೆ.ಶೆಟ್ಟಿ,ರೊ.ಬಾಲಕ್ರಷ್ಣ ,ರೊ.ದಿನೇಶ್ ಬೊಳಂತಿಮೊಗರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ನಾಯಕ್, ಕಾರ್ಯದರ್ಶಿ ಕಿರಣ್ ಕುಮಾರ್ ಮೊದಕಾದವರು ಭಾಗವಹಿಸಿದ್ದರು.




