ಮಂಗಳೂರು: ನಾಪತ್ತೆಯಾಗಿದ್ದ ಯುವಕನ ಕೂಳೂರಿನ ನದಿಯಲ್ಲಿ ಪತ್ತೆ
ಮಂಗಳೂರು: ನಾಪತ್ತೆಯಾಗಿದ್ದ ಯುವಕ ಶವವಾಗಿ ಕೂಳೂರಿನ ನದಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕಾವೂರಿನ ಯುವಕ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದು, ಇಂದು ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕನನ್ನು ಕಾವೂರು ನಿವಾಸಿ ಚೇತನ್ ಕುಮಾರ್(28) ಎಂದು ಗುರುತಿಸಲಾಗಿದೆ.
ಚೇತನ್ ಕುಮಾರ್ ಎರಡು ದಿನಗಳ ಹಿಂದೆ ನಾಪತ್ತೆಯಗಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಕೂಳೂರು ಸೇತುವೆಯಲ್ಲಿ ಶವವೊಂದು ಪತ್ತೆಯಾಗಿದ್ದು, ಶವವನ್ನು ನಾಪತ್ತೆಯಾಗಿದ್ದ ಚೇತನ್ ಎಂದು ಗುರುತಿಸಲಾಗಿದೆ.





