March 26, 2026

ವಿಟ್ಲ: ಭಾರೀ ಮಳೆಗೆ ತೋಡು ಬದಿ ಕುಸಿತ: ಅಪಾಯದಲ್ಲಿ ಮನೆ

0
IMG-20220702-WA0010.jpg

ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ತೋಡಿನ ಬದಿ ಕುಸಿದು ಮನೆ ಅಪಾಯದಲ್ಲಿದೆ.

ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಪಿಲಿಂಜ ಅವರಿಗೆ ಸೇರಿದ ಮನೆಯ ಪಕ್ಕದಲ್ಲಿ ತೋಡು ಇದ್ದು, ಮಳೆಗೆ ಅದರ ಬದಿ ಕುಸಿದು ಬಿದ್ದಿದೆ. ಇದರಿಂದ ಮನೆಯೂ ಅಪಾಯದ ಅಂಚಿನಲ್ಲಿದ್ದು, ಈಗಾಗಲೇ ಮನೆಯ ಮಣ್ಣಿನ ಗೋಡೆ ಬಿರುಕು ಬಿಟ್ಟಿದೆ. ಈ ಮನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 15 ಮಂದಿ ವಾಸಿಸುತ್ತಿದ್ದು, ಆತಂಕದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!