ಸೋನಿಯಾ ಗಾಂಧಿಯ ಆಪ್ತ ಕಾರ್ಯದರ್ಶಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಪಿ.ಪಿ.ಮಾಧವನ್ (71) ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
26 ವರ್ಷ ವಯಸ್ಸಿನ ಯುವತಿಯೊಬ್ಬರು ಈ ಬಗ್ಗೆ ನವದೆಹಲಿಯ ಉತ್ತಮ ನಗರ ಪೊಲೀಸರಿಗೆ ಜೂ.25ರಂದು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ.
ಪಿಪಿ ಮಾಧವನ್ (71ವರ್ಷ) ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. 2020ರಲ್ಲಿ ತನ್ನ ಪತಿ ತೀರಿಹೋದ ನಂತರ ಉದ್ಯೋಗದ ಹುಡುಕಾಟದಲ್ಲಿದ್ದಾಗ ಮಾಧವನ್ ಅವರ ಪರಿಚಯವಾಗಿತ್ತು.
ನಂತರ ಸಂದರ್ಶನಕ್ಕೆ ಕರೆದಿದ್ದರು, ಹೀಗೆ ಪರಿಚಯವಾದ ನಂತರ ವಿಡಿಯೋ ಕಾಲ್, ವಾಟ್ಸಪ್ ಚಾಟ್ ಮಾಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.





