ಕಾಸರಗೋಡು ಜಿಲ್ಲೆಯ ಹಲವೆಡೆ ಭಾರೀ ಶಬ್ದದೊಂದಿಗೆ ಭೂಮಿ ಕಂಪನ
ಕಾಸರಗೋಡು: ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಕಲ್ಲಪಳ್ಳಿ ಪರಿಸರದಲ್ಲಿ ಇಂದು ಬೆಳಿಗ್ಗೆ ಕಂಪನ ಉಂಟಾಗಿದೆ, ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು , ಬೆಳಿಗ್ಗೆ 7.45 ರ ಸುಮಾರಿಗೆ ಈ ಘಟನೆ ನಡೆದಿದೆ.
ಜೂನ್ 25 ರಂದು ಉಂಟಾದ ಕಂಪನದ ಶಬ್ದಕ್ಕಿಂತ ಈ ಬಾರಿ ಹೆಚ್ಚಿನ ಶಬ್ದ ಕೇಳಿ ಬಂದಿದ್ದು , ಜನತೆಯಲ್ಲಿ ಭಯವನ್ನು ಉಂಟು ಮಾಡಿತ್ತು. ಕಂಪನಕ್ಕೆ ಮನೆಗಳಿಗೆ ಹಾಗೂ ಇನ್ನಿತರ ಹಾನಿ ಬಗ್ಗೆ ವರದಿಯಾಗಿಲ್ಲ . ಶಬ್ದ ಹಾಗೂ ಕಂಪನದಿಂದ ಹಲವು ಮಂದಿ ಮನೆಯಿಂದ ಹೊರ ಓಡಿ ಬಂದಿದ್ದು , ವಾರದ ಅವಧಿಯಲ್ಲಿ ಎರಡು ಬಾರಿ ಉಂಟಾದ ಕಂಪನದಿಂದ ಜನತೆಯಲ್ಲಿ ಭಯದ ವಾತಾವರಣ ಮೂಡಿಸಿದೆ