March 21, 2026

ಉಳ್ಳಾಲ: ವಿದೇಶಿ ಸರಕು ಸಾಗಾಟದ ಹಡಗು ಮುಳುಗಡೆ: ಮಿನಿ ಜೆಟ್ ವಿಮಾನ ಕಣ್ಗಾವಲು: ತೈಲ ಸೋರಿಕೆ ಆತಂಕ

0
IMG-20220626-WA0006.jpg

ಉಳ್ಳಾಲ: ಉಚ್ಚಿಲದ ಬಟ್ಟಪಾಡಿ ಕಡಲ ತೀರದಲ್ಲಿ ವಿದೇಶಿ ಸರಕು ಸಾಗಣೆ ಹಡಗು ಮುಳುಗಡೆ ಬೆನ್ನಲ್ಲೇ ತೈಲ ಸೋರಿಕೆಯ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಇಂಡಿಯನ್ ಕೋಸ್ಟ್ ಗಾರ್ಡ್ ನ ಮಿನಿ ಜೆಟ್ ವಿಮಾನದ ಮೂಲಕ ಸಮುದ್ರದಲ್ಲಿ ಗಸ್ತು ಹೆಚ್ಚಿಸಲಾಗಿದ್ದು, ಸಿಬ್ಬಂದಿಗೆ ನಿನ್ನೆಯೂ ಪ್ರಾತ್ಯಕ್ಷಿಕೆ ನಡೆಸಲಾಗಿದೆ.

ಜೂ.23ರಂದು ಮುಳುಗಡೆಯಾದ ಸಿರಿಯಾ ದೇಶದ ಎಂ.ಬಿ.ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗಿನಲ್ಲಿ 220 ಮೆಟ್ರಿಕ್ ಟನ್ ತೈಲವಿದ್ದು, ಹಡಗು ಸಂಪೂರ್ಣ ಮುಳುಗಡೆಯಾದ ಪರಿಣಾಮ ತೈಲ ಸೋರಿಕೆ ಆತಂಕ ಹೆಚ್ವಾಗಿದೆ. ಹೀಗಾಗಿ ಕೋಸ್ಟ್ ಗಾರ್ಡ್ ಗೆ ಸೇರಿದ ಮಿನಿ ಜೆಟ್ ವಿಮಾನದ ಮೂಲಕ ಹಡಗಿನ ಕಣ್ಗಾವಲು ಮಾಡಲಾಗುತ್ತಿದೆ. ತೈಲ ಸೋರಿಕೆ ಸಾಧ್ಯತೆ ಹಿನ್ನೆಲೆ ಸಮುದ್ರದ ಸುತ್ತ ಜೆಟ್ ವಿಮಾನ ಸುತ್ತಾಟ ನಡೆಸುತ್ತಿದ್ದು, ತೈಲ ಸೋರಿಕೆಯಾದರೆ ತುರ್ತು ಪರಿಸ್ಥಿತಿ ಎದುರಿಸಲು ವಿಮಾನದ ಮೂಲಕ ಮಾನಿಟರ್ ಮಾಡಲಾಗುತ್ತಿದೆ.

ತೈಲ ಸೋರಿಕೆ ಕಂಡು ಬಂದರೆ ತಕ್ಷಣ ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನೆಗೆ ಸೂಚಿಸಲಾಗಿದೆ. ಈ ನಡುವೆ ಉಳ್ಳಾಲ ಕಡಲ ತೀರದಲ್ಲಿ ಭಾನುವಾರವೂ ಕೋಸ್ಟ್ ಗಾರ್ಡ್ ತಂಡ ಅಣಕು ಪ್ರದರ್ಶನ ಮುಂದುವರೆಸಿದೆ. ಅಣಕು ಪ್ರದರ್ಶನದ ಜೊತೆಗೆ ಸಿಬ್ಬಂದಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಹಡಗಿನಿಂದ ತೈಲ ಸೋರಿಕೆಯಾದರೆ ವಿಪತ್ತು ಪರಿಸ್ಥಿತಿ ನಿಯಂತ್ರಿಸಲು ಸನ್ನದ್ದರಾಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸಮುದ್ರದ ‌ನೀರಿನಲ್ಲಿ ತೈಲದ ಅಂಶ ಪತ್ತೆಯಾದರೆ ಅಲರ್ಟ್ ಇರುವುದು ಮತ್ತು ಸಮುದ್ರ ‌ತೀರದ ಮರಳು ಮತ್ತು ನೀರಿನಲ್ಲಿ ತೈಲದ ಅಂಶ ಪತ್ತೆ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಕೋಸ್ಟ್ ಗಾರ್ಡ್ , ಎನ್ ಡಿಆರ್ ಎಫ್, ಅಗ್ನಿಶಾಮಕ ದಳ, ಉಳ್ಳಾಲ ಪೊಲೀಸ್ ಇಲಾಖೆ, ಹೋಂ ಗಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!