August 25, 2026

ಮೂಲ್ಕಿ : ಭೀಕರ ಅಪಘಾತ – ಅಂತಿಮ ಬಿಸಿಎ ವಿದ್ಯಾರ್ಥಿಯ ದಾರುಣ ಸಾವು

0
image_editor_output_image-665075552-1656226144396.jpg

ಮೂಲ್ಕಿ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ರಾತ್ರಿ ಮೂಲ್ಕಿಯಲ್ಲಿ ಸಂಭವಿಸಿದೆ.

ದೀಕ್ಷಿತ್ ಮನೀಷ್
ಮನೀಷ್ ಮೃತ ವಿದ್ಯಾರ್ಥಿಯಾಗಿದ್ದು, ಕೊಲಕಾಡಿ ನಿವಾಸಿಯಾಗಿದ್ದು, ಮೂಲ್ಕಿಯ ಖಾಸಗಿ ಕಾಲೇಜ್ ಒಂದರಲ್ಲಿ ಅಂತಿಮ ಬಿಸಿಎ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಇನ್ನೊಂದು ಬೈಕ್ ನಲ್ಲಿದ್ದ ಅದೇ ಕಾಲೇಜಿನ ದೀಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ಮನೀಷ್ ದೀಕ್ಷಿತ್ ಕಾಲು ತುಂಡಾಗಿ, ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಂಚಾರಿ ಉತ್ತರ ವಲಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!