March 20, 2026

ಉಳ್ಳಾಲ: ಪ್ರವಾಸಿ ತಂಡಗಳಿಂದ ಹೊಡೆದಾಟ: ಬೆಂಗಳೂರಿನಿಂದ ಉಚ್ಚಿಲ ಗೆಸ್ಟ್ ಹೌಸ್ ಗೆ ಪಾರ್ಟಿ ಮಾಡಲು ಬಂದಿದ್ದ ತಂಡ

0
image_editor_output_image-38452643-1656217164496

ಉಳ್ಳಾಲ, ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದ ತಂಡಗಳೆರಡು ಕುಡಿದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡು ಸ್ಥಳೀಯ ಮನೆಗೆ ನುಗ್ಗಿ ತೊಂದರೆ ನೀಡಿದ ಘಟನೆ ಉಚ್ಚಿಲ ಬಟ್ಟಪ್ಪಾಡಿಯ ಖಾಸಗಿ ಗೆಸ್ಟ್‌ ಹೌಸ್‌ನಲ್ಲಿ ನಡೆದಿದೆ.

ಗೆಸ್ಟ್‌ಹೌಸ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ನಡೆಯುತ್ತಿತ್ತು. ಇದಕ್ಕಾಗಿ ಎರಡು ಬಸ್‌ಗಳಲ್ಲಿ ಬೆಂಗಳೂರಿನಿಂದ ಜನರು ಬಂದಿದ್ದರು. ಪಾರ್ಟಿ ನಡೆಸಿ ಕೊನೆಗೆ ಬಂದಿದ್ದ ಜನರು ಎರಡು ತಂಡಗಳಾಗಿ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟವು ಗೆಸ್ಟ್‌ಹೌಸ್‌ ಒಳಗಿನಿಂದ ಹೊರಭಾಗಕ್ಕೂ ಬಂದಿದ್ದು, ಈ ವೇಳೆ ಕುಡಿತದ ಅಮಲಿನಲ್ಲಿದ್ದವರು ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ಮನೆಯವರಿಗೆ ತೊಂದರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!