March 19, 2026

ಮಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣ ಭಸ್ಮ

0
image_editor_output_image-1989576029-1656048376523.jpg

ಮಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ನಗರ ಹೊರವಲಯದ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿ ಶುಕ್ರವಾರ ನಡೆದಿದೆ.

ಅಗ್ನಿ ಅವಘಡದಿಂದ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಶೋರೂಮ್‌ನಲ್ಲಿ ಹೊಗೆ ಕಾಣಿಸಿದೆ. ಶೋರೂಮ್‌ನ ಮೇಲೇ ಇದ್ದ ಮನೆಯವರು ಹೊಗೆಯಾಡುತ್ತಿರುವುದನ್ನು ಕಂಡ ಮನೆ ಮಂದಿ ಕೆಳಗಿಳಿದು ಬಂದಾಗ ಪರಿಶೀಲಿಸಿದಾಗ ಅಗ್ನಿ ಅವಘಡ ಗಮನಕ್ಕೆ ಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!