March 19, 2026

ಸುರತ್ಕಲ್: ಕ್ರೇನ್‌ ಮೂಲಕ ಅನ್ಲೋಡ್‌ ಕೆಲಸ ಮಾಡುತ್ತಿದ್ದಾಗ ಕೌಂಟರ್‌ ವೇಟ್‌ ತಾಗಿ ಕಾರ್ಮಿಕ ಮೃತ್ಯು

0
image_editor_output_image-1292998813-1656048659324.jpg

ಸುರತ್ಕಲ್: ಫ್ಯಾಕ್ಟರಿಯೊಂದರ ಗುತ್ತಿಗೆ ಸಂಸ್ಥೆಯಲ್ಲಿ ಕಾರ್ಮಿಕನಾಗಿದ್ದ ವ್ಯಕ್ತಿಯೋರ್ವ ಕ್ರೇನ್‌ ಮೂಲಕ ಅನ್ಲೋಡ್‌ ಕೆಲಸ ಮಾಡುತ್ತಿದ್ದಾಗ ಕೌಂಟರ್‌ ವೇಟ್‌ ತಾಗಿ ತಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಸುರತ್ಕಲ್ ಸಮೀಪದ ಕಾನಾ ನಿವಾಸಿ ಕೇಶವ ಕೋಟ್ಯಾನ್ (47) ಎಂದು ಗುರುತಿಸಲಾಗಿದೆ. ಕೇಶವ ಅವರು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಫ್ಯಾಕ್ಟರಿಗೆ ಸಂಬಂಧಿಸಿದ ಟ್ರೇಲರ್‌ನಲ್ಲಿದ್ದ ಕೌಂಟರ್‌ ವೇಟ್‌ನ್ನು ಕ್ರೇನ್‌ ಮುಖೇನ ಅನ್‌ಲೋಡ್ ಮಾಡುತ್ತಿದ್ದರು.

ಈ ವೇಳೆ ಕೌಂಟರ್‌ ವೇಟ್‌ ಕೇಶವ ಅವರಿಗೆ ತಾಗಿದೆ. ಇದರಿಂದಾಗಿ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಎ.ಜೆ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದರು.

ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!