ಕುಂದಾಪುರ: ಚಿನ್ನಾಭರಣ, ನಗದು ಕಳವು ಆರೋಪಿಯ ಬಂಧನ
ಕುಂದಾಪುರ: ಕಮಲಶಿಲೆ ಗ್ರಾಮದ ರಾಘವೇಂದ್ರ ಯಡಿಯಾಳ(41) ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳ್ಳತನವಾದ ಘಟನೆ ನಡೆದಿದೆ.
1,30,000 ಮೌಲ್ಯದ ಎರಡು ಚಿನ್ನದ ಬಳೆಗಳು, 1,50,000 ಮೌಲ್ಯದ ಚಿನ್ನದ ಸರ, 20,000 ಮೌಲ್ಯದ ಚಿನ್ನದ ಉಂಗುರ ಮತ್ತು 5,000 ರೂ.ನಗದು ಕಳ್ಳತನವಾಗಿದೆ.
ತನಿಖೆ ಮುಂದುವರಿಸಿದ ಪೊಲೀಸರು ಬೈಂದೂರು ಉಪ್ಪುಂದ ನಿವಾಸಿ ಶ್ರೀಧರ್ ಮಡಿವಾಳ (38) ಎಂಬಾತನನ್ನು ಬಂಧಿಸಿದ್ದು, ಕಳವು ಮಾಡಿದ್ದ ಚಿನ್ನದ ಬಳೆಗಳು, ಚಿನ್ನದ ಸರ ಮತ್ತು ಚಿನ್ನದ ಉಂಗುರವನ್ನು ಒಟ್ಟು 3 ಲಕ್ಷ ರೂ. ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




