March 26, 2026

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸವಾರ ಮೃತ್ಯು

0
IMG-20220614-WA0025.jpg

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರೊಬ್ಬರು ಮೃತ ಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ನೆಹರುನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ. ಪುತ್ತೂರು ನಗರದ ಎಂ. ಟಿ. ರಸ್ತೆಯ ಮಹಮ್ಮಾಯಿ ದೇವಸ್ಥಾನದ ಬಳಿ ಶ್ರೀ ದುರ್ಗಾ ಹೆಸರಿನ ಕೀ ಮತ್ತು ಸ್ಟವ್ ರಿಪೇರಿ ಅಂಗಡಿ ನಡೆಸುತಿದ್ದ ರವೀಂದ್ರ (60)ಮೃತಪಟ್ಟವರು.

ರವೀಂದ್ರ ಅವರು ನೆಹರು ನಗರ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಚಲಾಯಿಸಿಕೊಂಡು ಬರುತಿದ್ದ ಆಕ್ಟಿವಾ ಮತ್ತು ಪುತ್ತೂರು ಪೇಟೆಯಿಂದ ನೆಹರುನಗರ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ನೆಹರುನಗರ ಸಮೀಪದ ಮಾಸ್ಟರ್ ಪ್ಲಾನರಿ ಎದುರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಕ್ಕಿ ಸಂಭಾವಿಸಿದೆ. ಘಟನೆಯಲ್ಲಿ ತಲೆಯ ಭಾಗಕ್ಕಾದ ಗಂಭೀರ ಗಾಯದಿಂದಾಗಿ ರವೀಂದ್ರ ಅವರು ಮೃತ ಪಟ್ಟಿದ್ದಾರೆ. ಬೈಕ್ ಸವಾರ ಕೂಡ ಗಾಯಗೊಂದಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!