September 20, 2024

ಪಿಜ್ಜಾ ಡೆಲಿವರಿಯ ಹುಡುಗಿಯ ಮೇಲೆ ಹಲ್ಲೆ ನಡೆಸಿದ ನಾಲ್ವರು ಯುವತಿಯರು

0

ಇಂದೋರ್: ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಾಲ್ವರು ಯುವತಿಯರು ವಾರಾಂತ್ಯ ಎಂಜಾಯ್ಮೆಂಟ್ಗಾಗಿ ಪಿಜ್ಜಾ ಡೆಲಿವರಿ ಮಾಡಲು ಬಂದಿದ್ದ ಹುಡುಗಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಆ ಹುಡುಗಿಯನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದಿಷ್ಟೂ ಪ್ರಸಂಗ ವಿಡಿಯೋದಲ್ಲಿ ಸೆರೆಯಾಗಿದೆ. ಪಿಜ್ಜಾ ಹುಡುಗಿಯ ಬಗ್ಗೆ ಕನಿಕರ ತೋರಿ, ಆ ವಿಡಿಯೋ ವೈರಲ್ ಸಹ ಆಗಿದೆ.

ಆರೋಪಿತ ನಾಲ್ವರು ಯುವತಿಯರು ಡಾಮಿನೋಸ್ ಪಿಜ್ಜಾಗಾಗಿ ಆರ್ಡರ್ ಮಾಡಿದ್ದರು. ಪಿಜ್ಜಾ ಡೆಲಿವರಿ ಮಾಡಿದ ಬಳಿಕ ಆ ನಾಲ್ವರೂ ಯುವತಿಯರು ಮನೆ ಮುಂದೆ ಬೀದಿಯಲ್ಲಿ ಪಿಜ್ಜಾ ಡೆಲಿವರಿ ಹುಡುಗಿಯನ್ನು ನೆಲಕ್ಕೆ ಕೆಡವಿಕೊಂಡು ಪ್ರಾಣಿಗಳಿಗೆ ಬಡಿಯುವಂತೆ ಬಡಿದಿದ್ದಾರೆ.

ಆ ಪಿಜ್ಜಾ ಡೆಲಿವರಿ ಹುಡುಗಿ ದಮ್ಮಯ್ಯ ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದರೂ ಕೇಳದೆ, ಮತ್ತಷ್ಟು ರೋಷಾವೇಶಗೊಂಡು ಬಾರಿಸಿದ್ದಾರೆ. ಬರಿಗಯ್ಯಲ್ಲಷ್ಟೇ ಅಲ್ಲ; ಕೋಲು ತೆಗೆದುಕೊಂಡು ಸಹ ಬಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!